ಸಿಲಿಕನ್
	ಆವರ್ತಕೋಷ್ಟಕದ 4ಎ ಗುಂಪಿನ 3ನೆಯ ಆವರ್ತದ ಅಲೋಹ ಧಾತು. ಪ್ರತೀಕ Si. ಪರಮಾಣು ಸಂಖ್ಯೆ 14. ಪರಮಾಣು ತೂಕ 28.09. ದ್ರವನಬಿಂದು 14070ಸೆ. ಕುದಿಬಿಂದು 23550ಸೆ. ಸಾಪೇಕ್ಷಸಾಂದ್ರತೆ 2.3. ಎಲೆಕ್ಟ್ರಾನ್ ವಿನ್ಯಾಸ 1s2 2s2 2ಠಿ6 3s2 3ಠಿ2. ಸಿಲಿಕನ್-28,29 ಮತ್ತು 30 ಸ್ಥಿರ ಹಾಗೂ  27,31 ಮತ್ತು 32 ಅಸ್ಥಿರ ಸಮಸ್ಥಾನಿಗಳು.

	ಧಾತುಲಭ್ಯತೆಯ ಸಮೃದ್ಧಿಆಧಾರಿತ ಸರಣಿಯಲ್ಲಿ ಭೂಚಿಪ್ಪಿನ 28%ರಷ್ಟಿರುವ ಸಿಲಿಕನಿನ ಕ್ರಮಾಂಕ 2. ಸಿಲಿಕನ್ ಡೈಆಕ್ಸೈಡ್ (ಸಿಲಿಕ) ಮತ್ತು ಲೋಹಸಿಲಿಕೇಟುಗಳ ರೂಪದಲ್ಲಿ ಮಾತ್ರ ಲಭ್ಯ. ಸ್ವೀಡಿಶ್ ರಸಾಯನ ವಿಜ್ಞಾನಿ ಬ್ಯಾರನ್ ಜೋನ್ಸ್ ಜೇಕಬ್ ಬರ್ಝಿಲಿಯಸ್ ಇದನ್ನು ಸಂಯುಕ್ತಗಳಿಂದ ಪ್ರತ್ಯೇಕಿಸಿ ಆವಿಷ್ಕರಿಸಿದ (1823). ವಿದ್ಯುತ್ಕುಲುಮೆಯಲ್ಲಿ ಸಿಲಿಕವನ್ನು ಅಪಕರ್ಷಿಸಿದರೆ ಸಿಲಿಕನ್ ಲಭ್ಯ. 

	ಇದು ಕಂದು ಬಣ್ಣದ ಪುಡಿ ಅಥವಾ ಕಡು ಬೂದು ಬಣ್ಣದ ಸ್ಫಟಿಕ, ಅರೆವಾಹಕ. ಸಂಯುಕ್ತಗಳಲ್ಲಿ ಇದರ ಉತ್ಕರ್ಷಣ  ಸ್ಥಿತಿಗಳು:  +2 ಮತ್ತು +4. ಅಧಿಕ  ತಾಪದಲ್ಲಿ  ಅನೇಕ  ಪದಾರ್ಥಗಳೊಂದಿಗೆ  ವರ್ತಿಸುತ್ತದೆ (ಉದಾ: 4000ಸೆ. ತಾಪದಲ್ಲಿ ಆಕ್ಸಿಜನಿನೊಂದಿಗೆ ವರ್ತಿಸಿ ಸಿಲಿಕವಾಗುತ್ತದೆ). ಕಾಸಿದಾಗ ಅನೇಕ ಆಕ್ಸೈಡುಗಳನ್ನು ಅಪಕರ್ಷಿಸು ತ್ತದೆ. ಹೈಡ್ರೊಫ್ಲೋರಿಕಾಮ್ಲ ಮತ್ತು ನೈಟ್ರಿಕಾಮ್ಲಗಳ ಮಿಶ್ರಣದಲ್ಲಿ ವಿಲೇಯ. ಕ್ಷಾರಗಳಲ್ಲಿ ಅತಿವೇಗದಲ್ಲಿ ಲೀನಿಸಿ ಹೈಡ್ರೊಜನ್ ಬಿಡುಗಡೆ. ಸಿಲಿಕೈಡುಗಳು, ಹ್ಯಾಲೈಡುಗಳು, ಆಕ್ಸೈಡುಗಳು, ಸಿಲಿಕೇಟುಗಳು, ಸಿಲಿಕೋನುಗಳು ಮುಂತಾದ ಅನೇಕ ಸಂಯುಕ್ತಗಳನ್ನು ರೂಪಿಸುತ್ತದೆ.

	ಲೋಹ, ಎಲೆಕ್ಟ್ರಾನಿಕ್ಸ್, ಗಾಜು, ಸಿಮೆಂಟು, ವಿದ್ಯುದುಪಕರಣ ಇವೇ ಮೊದಲಾದ ಅನೇಕ ಉದ್ಯಮಗಳಲ್ಲಿ ವ್ಯಾಪಕ ಬಳಕೆ. ಆರ್ಗೆನೊಸಿಲಿಕನ್ ಸಂಯುಕ್ತಗಳ ಸಂಶ್ಲೇಷಣೆಗೆ ಬಳಕೆ.			

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
	
		    (ಎಸ್.ಎನ್.ಆರ್.)